ಹನೂರು: ಬೋನಸ್‌ನಿಂದ ದೇವಸ್ಥಾನ ಅಭಿವೃದ್ಧಿಗೆ ₹1 ಲಕ್ಷ ಉದ್ದನೂರು ಹಾಲು ಉತ್ಪಾದಕರ ಸಂಘ ಸದಸ್ಯರಿಂದ ವಿಶಿಷ್ಟ ತೀರ್ಮಾನ
ಹನೂರು: ಉದ್ದನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ತಮ್ಮ ಬೋನಸ್‌ನ ಒಂದು ಭಾಗವನ್ನು ಸಮಾಜಮುಖಿ ಕಾರ್ಯಕ್ಕಾಗಿ ಮೀಸಲಿಟ್ಟು, ಗ್ರಾಮದ ದಂಡಿನ ಮಾರಮ್ಮ ಮತ್ತು ಚೌಡಿ ಮಾರಮ್ಮ ದೇವಾಲಯಗಳ ಅಭಿವೃದ್ಧಿಗೆ ₹1 ಲಕ್ಷ ನೀಡಲು ತೀರ್ಮಾನಿಸಿದ್ದಾರೆ. ಉದ್ದನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಸೋಮವಾರ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ, ಕಳೆದ ಒಂದು ವರ್ಷದಲ್ಲಿ ಸಂಘವು ₹3.68 ಲಕ್ಷ ಆದಾಯ ಗಳಿಸಿದೆ ಎಂಬ ವಿಷಯ ಬಹಿರಂಗವಾಯಿತು. ಇದರ ಪೈಕಿ ₹1.71 ಲಕ್ಷವನ್ನು ಬೋನಸ್ ರೂಪದಲ್ಲಿ ಸದಸ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ. ಆದರೆ ಈ ಬೋನಸ್ ನಿಂದ ದೇವಸ್ಥಾನ ಅಭಿವೃದ್ಧಿಗೆ ತಿರ್ಮಾನಿಸಿದ್ದಾರೆ