ಸಿರವಾರ: ಸಿರವಾರ : ರಸ್ತೆ ಬದಿಗೆ ಸಂತೆ ಬಜಾರ್, ಬಸ್ಸು ವಾಹನ ಸವಾರರಿಗೆ ಕಿರಿಕಿರಿ
Sirwar, Raichur | Oct 20, 2025 ಸಿರವಾರ ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಬಸ್ಸು, ಲಾರಿ ಸೇರಿದಂತೆ ವಿವಿಧ ವಾಹನಗಳ ಸವಾರರು ಕಿರಿಕಿರಿ ಅನುಭವಿಸಿದ ಘಟನೆ ಜರುಗಿದೆ. ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ಜರುಗುತ್ತದೆ. ಈ ಒಂದು ಸಂತೆ ರಸ್ತೆ ಬದಿಯಲ್ಲಿಯೇ ಜರುಗುತ್ತದೆ, ತರಕಾರಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕೊಳ್ಳಲು ನಿವಾಸಿಗಳು ಮತ್ತು ಸುತ್ತಲಿನ ಗ್ರಾಮಸ್ಥರು ರಸ್ತೆಯಲ್ಲಿ ನಿಲ್ಲುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಕಿರಿಕಿರಿಯಾಗುತ್ತದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂತೆ ಬಜಾರ್ ಎಪಿಎಂಸಿ ಮಾರುಕಟ್ಟೆಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳಿಯರ ಒತ್ತಾಯವಾಗಿದೆ.