ಜೋಯಿಡಾ : ತಾಲೂಕಿನ ಸಂಜೀವನಿ ಸೇವಾ ಟ್ರಸ್ಟ್ ಹಾಗೂ ಕೈಗಾದ ಕೈಗಾ ಬರ್ಡರ್ಸ್ ಸಂಸ್ಥೆಯ ಆಶ್ರಯದಡಿ ತಾಲೂಕಿನ ಕುಂಬಾರವಾಡದ ಕಾಟೇಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಜೀವನಿ ಬರ್ಡಿಂಗ್ ಟ್ರೈಲ್ ಪಕ್ಷಿ ವೀಕ್ಷಣೆ ಕಾರ್ಯಕ್ರಮವು ಸೋಮವಾರ ಸಂಜೆ 5:30 ಗಂಟೆ ಸುಮಾರಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಳೆದ ಎಂಟು ವರ್ಷಗಳಿಂದ ಸತತವಾಗಿ ಸಂಜೀವನಿ ಟ್ರಸ್ಟ್ ವತಿಯಿಂದ ಪಕ್ಷಿ ವೀಕ್ಷಣೆಯ ಕಾರ್ಯಕ್ರಮ, * ಸಂಜೀವನಿ ಬರ್ಡಿಂಗ್ ಟ್ರೇಲ್ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.