ಮಾನ್ವಿ: ಮಾನ್ವಿ : ಮಂತ್ರಾಲಯ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭ
Manvi, Raichur | Oct 17, 2025 ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಾರ್ಯ ಮಾಡಲಾಗುತ್ತದೆ. ಇಂದು ಅಕ್ಟೋಬರ್ ತಿಂಗಳ 29 ದಿನದ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಮಠದ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ. ಹುಂಡಿ ಎಣಿಕೆ ಕಾರ್ಯ ಸಂಜೆ ವರೆಗೆ ನಡೆಯಲಿದ್ದು, ಮಠದ ಸಿಬ್ಬಂದಿಗಳು ಮತ್ತು ಭಜನಾ ಮಂಡಳಿಯ ಮಹಿಳೆಯರು ಭಾಗಿಯಾಗಿದ್ದಾರೆ ಎಂದರು. ಕಳೆದ ತಿಂಗಳು ಹುಂಡಿಲ್ಲಿ ಮೂರು ಕೋಟಿಯಷ್ಟು ಕಾಣಿಕೆ ಸಂಗ್ರಹವಾಗಿತ್ತು.