ಸೂಪಾ: ಪ್ರವಾಸಿಗರನ್ನು ಮತ್ತು ರಾಪ್ಟ್ ಕೊಂಡೊಯ್ಯಲು ಬಾಡಿಗೆ ದರ ಹೆಚ್ಚಳಕ್ಕೆ ಆಗ್ರಹಿಸಿ ಸ್ಥಳೀಯ ಕ್ಯಾಂಪರ್ ವಾಹನ ಚಾಲಕರಿಂದ ಅವೇಡಾದಲ್ಲಿ ಆಗ್ರಹ
ಜೋಯಿಡಾ : ತಾಲೂಕಿನ ಅವೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಇಳಾವಾದಲ್ಲಿ ನಡೆಸುತ್ತಿರುವ ಜಲ ಸಾಹಸ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಜಟ್ಟಿಗಳವರು ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಾದ ನಿರ್ಧಾರದಂತೆ ಸ್ಥಳೀಯ ಕ್ಯಾಂಪರ್ ವಾಹನಗಳಿಗೆ ಮಾರ್ಪಡಿಸಲಾದ ಬಾಡಿಗೆ ದರವನ್ನು ನೀಡದೆ ಅನ್ಯಾಯ ಮಾಡಲಾಗುತ್ತಿರುವುದನ್ನು ಖಂಡಿಸಿ ಸ್ಥಳೀಯ ಕ್ಯಾಂಪರ್ ವಾಹನಗಳ ಮಾಲಕರು ಮತ್ತು ಚಾಲಕರು ಅವೇಡಾ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇಂದು ಶನಿವಾರ ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಕ್ಯಾಂಪರ್ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.