ಬೆಂಗಳೂರು ದಕ್ಷಿಣ: ಅಭಿಮಾನ್ ಸ್ಟುಡಿಯೋ ವಿಚಾರವಾಗಿ ನಕಾರಾತ್ಮಕ ಕಮೆಂಟ್ಸ್: ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನಟ ಅನಿರುಧ್ ಕುಟುಂಬವನ್ನು ಬಿಡದ ಕಿಡಿಗೇಡಿಗಳು,ವಿಷ್ಣುವರ್ಧನ್ ಕುಟುಂಬಕ್ಕೆ ನಿತ್ಯವೂ ಕಿಡಿಗೇಡಿಗಳಿಂದ ನಕಾರಾತ್ಮಕವಾಗಿ ಕಮೆಂಟ್ ಮಾಡಲಾಗುತ್ತಿದ್ದು ಈ ಬಗ್ಗೆ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅನಿರುದ್ ಕುಟುಂಬ ದೂರು ದಾಖಲಿಸಿದೆ. ಅಭಿಮಾನ್ ಸ್ಟುಡಿಯೋ ವಿಚಾರದಲ್ಲಿ ನಕಾರಾತ್ಮಕ ಕಮೆಂಟ್ಸ್ ಗಳು ಬರುತ್ತಿದ್ದು ಅನಿರುಧ್ ಮಗ ಹರ್ಷವರ್ಧನ್ ರಿಂದ ದೂರು ದಾಖಲು ಮಾಡಲಾಗಿದ್ದು, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿದೆ.