ಸಿರಗುಪ್ಪ: ನಗರದಲ್ಲಿ ಸತತ ಮಳೆಗೆ ಮನೆ ಕುಸಿತ, ಅಧಿಕಾರಿಗಳು ಭೇಟಿ
ತಾಲ್ಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ನಾಲ್ಕು ಮನೆಗಳು ಭಾಗಶಃ ಕುಸಿದು ಬಿದ್ದಿವೆ.ಬಾಗೇವಾಡಿ ಗ್ರಾಮದ ಈರಣ್ಣ, ಸಿದ್ದಪ್ಪ ಹಾಗೂ ಹಳೇಕೋಟೆಯ ಶಾರದಾ ಬಸವನಗೌಡ, ಹಂಪಮ್ಮ ಬೊಮ್ಮಣ್ಣ ಇವರ ಮನೆಗಳಿಗೆ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.ಇದೇ ವೇಳೆ ನಾಗರಹಾಳು, ಅಲಬನೂರು ಗ್ರಾಮಗಳ ಸುತ್ತಮುತ್ತ ಸುರಿದ ಭಾರೀ ಮಳೆಯಿಂದಾಗಿ ಕೋಳ್ಳಿ ಹಳ್ಳ ತುಂಬಿ ಹರಿದು ಸೆಪ್ಟಂಬರ್ 14,ಭಾನುವಾರ ಸಂಜೆ 6ಗಂಟೆಗೆ ಹತ್ತಿ ಬೆಳೆಗಳ ಜಮೀನುಗಳಿಗೆ ನೀರು ನುಗ್ಗಿದೆ.