ಚಡಚಣ: ಪಟ್ಟಣದಲ್ಲಿ ಹತ್ಯೆಯಾದ ಭೀಮನಗೌಡ ಬಿರಾದರ್ ಮಗನನ್ನು ಕಿಡ್ನಾಪ್ ಮಾಡಲು ಯತ್ನ ಕುಟುಂಬಸ್ಥರ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಹತ್ಯೆ ಮಾಡಿದ ಆರೋಪಿ, ಸುನಿಲ್ ಎಂಬತಾ ಭೀಮನ್ ಗೌಡ ಬಿರಾದಾರ್ ಪುತ್ರನನ್ನು ಅಪಹರಿಸಲು ಯತ್ನ ಮಾಡಿರುವ ಘಟನೆ ಗುರುವಾರ ರಾತ್ರಿ 8ಗಂಟೆ ಸುಮಾರಿಗೆ ಸಂಭವಿಸಿದೆ. ಭೀಮನ್ ಗೌಡ ಬಿರಾದಾರ್ ಪುತ್ರ ವಿಜಯದಶಮಿ ಹಬ್ಬದ ಪ್ರಯುಕ್ತ ಬನ್ನಿ ವಿನಿಮಯ ಮಾಡಲು ಹೋದ ಸಂದರ್ಭದಲ್ಲಿ ಸುನಿಲ್ ಎಂಬತ್ತಾ ಅಪರಿಸಲು ಯತ್ನ ಮಾಡಿದ ಸ್ಥಳೀಯರ ನೆರವಿನಿಂದ ಅಪಹರಣ ವಿಫಲವಾಗಿದೆ. ಇನ್ನು ಭೀಮನಗೌಡ ಬಿರಾದರ್ ಕುಟುಂಬಸ್ಥರು ಕೂಡಲೇ ಅಪಹರಣಕಾರ ಸುನಿಲನ್ನು ಬಂಧಿಸಬೇಕು ಎಂದು ನಡು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.