ವಡಗೇರಾ: ಮಹಾಮಳೆಗೆ ಕುಮನೂರ ಅರ್ಜುಣಗಿ ಗ್ರಾಮಗಳ ಮಧ್ಯದ ಸೇತುವೆ ಮುಳುಗಡೆ, ರಸ್ತೆ ಸಂಚಾರ ಬಂದ್
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಭೀಮ ನದಿ ದಡದಲ್ಲಿನ ಕುಮನೂರ ಹಾಗೂ ಅರ್ಜುಣಗಿ ಗ್ರಾಮಗಳ ಮಧ್ಯದ ಸೇತುವೆ ಮುಳುಗಡೆಯಾಗಿದ್ದರಿಂದ ಎರಡು ಗ್ರಾಮಗಳ ಮಧ್ಯದ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರ ಸಂಜೆ ಇಂತಹ ದೃಶ್ಯ ಕಂಡು ಬಂದಿದ್ದು ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ಸೇತುವೆಯ ಎತ್ತರ ಕಿರಿದಾಗಿದ್ದರಿಂದ ಪ್ರತಿ ಬಾರಿ ಮಳೆಗಾಲ ಬಂದಾಗ ಈ ರೀತಿ ಸಮಸ್ಯೆ ಉಂಟಾಗುತ್ತಿದ್ದು ಸೇತುವೆಯನ ಎತ್ತರ ಎತ್ತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.