ಗರ್ಲಗುಂಜಿ ಕ್ರಾಸ್ ಬಳಿ ಭತ್ತದ ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ. ರೈತ ಪ್ರಕಾಶ್ ಅವರಿಗೆ ಸೇರಿದ, ಕಚ್ಚಾ ಭತ್ತದ ಎರಡು ಬಣವೆಗಳು, ಕಡಲೆಕಾಯಿ ಸಿಪ್ಪೆಯ ಎರಡು ಬಣವೆಗಳು ಮತ್ತು ಕರಡ ಒಂದು ಬಣವೆ ಸೇರಿದಂತೆ ಒಟ್ಟು ಐದು ಜಾನುವಾರುಗಳ ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆ ಸುಮಾರು 30 ಚೀಲಗಳಷ್ಟು ಭತ್ತ ನಾಶವಾಗಿದ್ದು, ಈ ಘಟನೆಯಿಂದ ರೈತ ಪ್ರಕಾಶ್ ಅವರಿಗೆ ಸುಮಾರು 1.50 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ. ಬೆಳಗಾವಿಯ ರಾಜಹಂಸಗಡದ ಗರ್ಲಗುಂಜಿ ಕ್ರಾಸ್ ನಂದಿಹಳ್ಳಿ ರಸ್ತೆಯಲ್ಲಿ ಶನಿವಾರ ಜಾನುವಾರುಗಳ ಮೇವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದೆ