ಆಳಂದ: ನೂತನ ತಹಶಿಲ್ದಾರ ಪ್ರಕಾಶ್ ಹೊಸಮನಿ
ಆಳಂದ ನೂತನ ತಹಸಿಲ್ದಾರಾಗಿ ಪ್ರಕಾಶ ಹೊಸಮನಿ ಅವರನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.ಬುಧವಾರ ಬೆಳಿಗ್ಗೆ 11 ಘಂಟೆಗೆ ಅಧಿಕಾರ ಸ್ವೀಕರಿಸಿದರು.ಈಗಾಗಲೇ ಸುರೇಶ್ ಅಂಕಲಗಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.ಅಂಕಲಗಿಅವರು ಚುನಾವಣೆ ಕಾರ್ಯದಲ್ಲಿ ತೊಡಗಿದರು.ಇದರ ಮಧ್ಯೆ ವರ್ಗಾವಣೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ನೂತನ ತಹಶಿಲ್ದಾರ ಅವರನ್ನು ಇಂದು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಆಳಂದ ಸಹಾಯಕ ಚುನಾವಣಾಧಿಕಾರಿ ಮಹಾಂತೇಶ್ ಎನ್. ಮುಳಗುಂದಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು