ಬೆಂಗಳೂರು ಉತ್ತರ: ಮೆಜೆಸ್ಟಿಕ್ ಫುಟ್ಪಾತ್ ಅವ್ಯವಸ್ಥೆಯ ಕುರಿತು ವೀಡಿಯೋ ಮಾಡಿದ್ದ ವಿದೇಶಿ ಪ್ರಜೆಯನ್ನ ಕರೆತಂದು ಪ್ರಚಾರಕ್ಕೆ ಬಳಸಿತಾ ಪಾಲಿಕೆ ?!
ಬೆಂಗಳೂರಿನ ಫುಟ್ಪಾತ್ ಅವ್ಯವಸ್ಥೆಯ ಕುರಿತು ವೀಡಿಯೋ ಮಾಡಿದ್ದ ವಿದೇಶಿ ಪ್ರಜೆಯನ್ನ ಕರೆತಂದು ಪುನಃ ಹೊಗಳಿಕೆಯ ವೀಡಿಯೋ ಮಾಡಿಸಿದ ಪಾಲಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೆಜೆಸ್ಟಿಕ್ ಫುಟ್ಪಾತ್ ಅವ್ಯವಸ್ಥೆಯ ಕುರಿತು ಕೆನಡಾ ಮೂಲದ ವ್ಯಕ್ತಿಯೊಬ್ಬ ಮಾಡಿದ್ದ ವೀಡಿಯೋ ಸಾಕಷ್ಟು ಸುದ್ದಿಯಾಗಿತ್ತು.ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಅದೇ ಸ್ಥಳವನ್ನ ಸ್ವಯಂಸೇವಕರ ಸಹಕಾರದೊಂದಿಗೆ ಸೇರಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗಿಯಾದ ಪಾಲಿಕೆಯ ಆಯುಕ್ತ ರಾಜೇಂದ್ರ ಮೆನನ್ ಬಳಿಕ ಅವರೊಂದಿಗೆ ಕುಳಿತು ಉಪಹಾರ ಸೇವಿಸಿದ್ದರು. ಈ ಸಂದರ್ಭದಲ್ಲಿ ಕೆನಡಾ ಪ್ರಜೆಯನ್ನೂ ಕರೆಸಿ ಹೊಗಳಿಕೆ ವೀಡಿಯೋ ಮಾಡಿಸಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.