ಬೆಳಗಾವಿ: ಲಿಂಗಾಯತ ಸಮಾಜದ ಒಕ್ಕೂಟದ ನೇತೃತ್ವದಲ್ಲಿ ಕನ್ನೇರಿ ಮಠದ ಶ್ರೀಗಳಿಗೆ ಬೆಳಗಾವಿ ಪ್ರವೇಶ ನಿರ್ಬಂಧಿಸುವಂತೆ ನಗರದಲ್ಲಿ ಪ್ರತಿಭಟನೆ
ಬೆಳಗಾವಿ ನಗರದ ಡಿಸಿ ಕಚೇರಿ ಆವರಣದಲ್ಲಿ ಇಂದು ಶುಕ್ರವಾರ 12 ಗಂಟೆಗೆ ಲಿಂಗಾಯತ ಸಮಾಜದ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಬಸವ ಸಂಸ್ಕೃತಿ ಅಭಿಯಾನ ಕೈಗೊಂಡ ಮಠಾಧಿಪತಿಗಳಿಗೆ ಕನ್ನೇರಿ ಶ್ರೀಗಳು ಅವಹೇಳನ ಮಾಡಿದ್ದಾರೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಅವಹೇಳನಕಾರಿ, ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ವಿರೋಧಿಸಿ ಪ್ರತಿಭಟನೆ ಮಾಡಿದ್ದು ಕನ್ನೇರಿ ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಸಿದ್ದಾರೆ ಕಾನೂನು ಸುವ್ಯವಸ್ಥೆಗೆ ದಕ್ಕೆ ತರೋ ರೀತಿಯಲ್ಲಿ ಹೇಳಿಕೆ ಕೊಟ್ಟಿರುವ ಶ್ರೀಗಳ ವಿರುದ್ಧ ಕ್ರಮವಾಗಬೇಕು ಕರ್ನಾಟಕದಲ್ಲಿಯೇ ಸ್ವಾಮೀಜಿಗೆ ನಿರ್ಬಂಧ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.