ಮಾನ್ವಿ: ಪಟ್ಟಣದ ಬಸ್ ನಿಲ್ದಾಣದ ಮೇಲ್ಛಾವಣಿಯಿಂದ ಮಳೆ ನೀರು ಬಂದದ್ಹೇಗೆ; ರೊಚ್ಚಿಗೆದ್ದ ಪ್ರಯಾಣಿಕರು ಮಾಡಿದ್ದೇನು
Manvi, Raichur | Sep 29, 2025 ಭಾರೀ ಮಳೆಯಿಂದಾಗಿ ಬಸ್ ನಿಲ್ದಾಣದ ಮೇಲ್ಚಾವಣಿಯ ಪೈಪ್ ದುರಸ್ತಿ ಮಾಡದ ಕಾರಣ ಪೈಪ್ ನಲ್ಲಿ ಮಳೆ ನೀರು ಸೋರಿಕೆಯಾಗಿ ಪ್ರಯಾಣಿಕರು ಪರದಾಡಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೆ.29 ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಸಂಭವಿಸಿದೆ. ಕಾಲಕಾಲಕ್ಕೆ ಪೈಪ್ ದುರಸ್ತಿ ಮಾಡಿಸದ ಕಾರಣ ಭಾರೀ ಮಳೆಗೆ ಪೈಪ್ ನಲ್ಲಿ ನೀರು ಸೋರಿಕೆಯಾಯಿತು. ಇದರಿಂದ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೊರಗಡೆ ಜೋರಾದ ಮಳೆ, ಒಳಗಡೆ ಪೈಪ್ ನಿಂದ ನೀರು ಸೋರಿಕೆಯಿಂದಾಗಿ ಪ್ರಯಾಣಿಕರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕೂಡಲೇ ಪೈಪ್ ದುರಸ್ತಿ ಮಾಡಿಸುವಂತೆ ಆಗ್ರಹಿಸಿದರು.