ಭಟ್ಕಳ: ಕಳೆದ 25 ವರ್ಷಗಳಿಂದ ನಿರಂತರ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಭಟ್ಕಳದ ಮಾರುತಿ ಪತ್ತಿನ ಸಹಕಾರಿ ಸಂಘದ ಅಶೋಕ ಪೈ ಅವರಿಗ 2025ನೇ ಸಾಲಿನ "ಸಹಕಾರ ರತ್ನ" ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಬಗ್ಗೆ ಗುರುವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಅಶೋಕ ಪೈಯವರು ಸಹಕಾರಿ ರಂಗದಲ್ಲಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು ಪ್ರತಿವರ್ಷ ಕೊಡಮಾಡುವ ಸಹಕಾರಿ ರತ್ನ ಪ್ರಶಸ್ತಿ 2025ಕ್ಕೆ ಆಯ್ಕೆ ಮಾಡಿದ್ದು, ನ.14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.