ಬೆಂಗಳೂರು ಉತ್ತರ: ಮೆಟ್ರೋದಲ್ಲಿ ಮೊಬೈಲ್ ಬಳಕೆ ಮಾಡಿದರೆ ಬೀಳುತ್ತದೆ ಭಾರಿ ದಂಡ
ಮೆಟ್ರೋದಲ್ಲಿ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಮೊಬೈಲ್ ಬಳಕೆ, ವಿಶೇಷವಾಗಿ ಹೆಚ್ಚು ಸೌಂಡ್ ಇಟ್ಟು ರೀಲ್ಸ್ ನೋಡಿದರೆ ಇನ್ಮುಂದೆ ಭಾರಿ ದಂಡ ಬೀಳಲಿದೆ. ಕಳೆದ ಒಂದು ವರ್ಷದಿಂದ ಈ ವಿಚಾರವಾಗಿ ಎಚ್ಚರಿಕೆ ನೀಡುತ್ತಿದ್ದರೂ ಪ್ರಯಾಣಿಕರಿಂದ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ, ಇದೀಗ ಬಿಎಂಆರ್ ಸಿಎಲ್ ಕಠಿಣ ನಿಯಮ ಜಾರಿಗೆ ತಂದಿದೆ. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಸಂಸ್ಥೆ ಮುಂದಾಗಿದೆ.