ಗೌರಿಬಿದನೂರು: ನಗರದಲ್ಲಿ ನಡೆದ ಬೈಪಾಸ್ ಗಣೇಶೋತ್ಸವದಲ್ಲಿ ಭಾಗವಹಿಸಿದ ಸಂಸದ ಡಾ.ಕೆ ಸುಧಾಕರ್
ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿರುವ ಗೌರಿಬಿದನೂರಿನ ಬೈಪಾಸ್ ಗಣೇಶೋತ್ಸವಕ್ಕೆ ಭಾನುವಾರ ಸಂಸದ ಡಾ.ಕೆ ಸುಧಾಕರ್ ರವರು ಗಣಪತಿಯ ದರ್ಶನ ಪಡೆದು ಅಲ್ಲಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.ಈ ವೇಳೆ ಮಾತನಾಡಿ,ಕಳೆದ 22 ವರ್ಷಗಳಿಂದ ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾ ಬಂದಿದ್ದು ಈ ವರ್ಷ ಪ್ರತಿಷ್ಠಾಪನೆ ಮಾಡಿರುವ ಶ್ರೀ ಸಿಂಧೂರ ಮಹಾಪ್ರಣವ ರುದ್ರ ಗಣಪತಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿದೆ ಎಂದರು.