ಕಲಬುರಗಿ : ಗಾಳಿಯಲ್ಲಿ ಗುಂಡು ಹೊಡೆದು ಅಶಾಂತಿ ವಾತವರಣ ಸೃಷ್ಟಿಸಿದ್ದ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶ್ರೀ ಶಂಕರಲಿಂಗೇಶ್ವರ ಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯನ್ನ ಅಫಜಲಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 22 ರಂದು ರಾತ್ರಿ 9.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕೆ ಮಠದ ಬಳಿ ಸ್ವಾಮಿಜಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಸಧ್ಯ ಮಠಕ್ಕೆ ಪೊಲೀಸರು ಆಗಮಿಸಿ ಸ್ವಾಮೀಜಿಯನ್ನ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ..