ತೀರ್ಥಹಳ್ಳಿ: ಫ್ರಾಕ್ ಧರಿಸಿದ ವ್ಯಕ್ತಿಯಿಂದ ಅಸಭ್ಯವರ್ತನೆ: ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು
ಪತಿಯೊಂದಿಗೆ ಕೊಠಡಿಯೊಂದರಲ್ಲಿ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಮೈಕೈ ಮುಟ್ಟಿ ಆತಂಕ ಮೂಡಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ದಂಪತಿ ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ತಂಗಿದ್ದರು ಕೊಠಡಿಯಲ್ಲಿ ಮಲಗಿದ್ದ ವೇಳೆ ಮಧ್ಯರಾತ್ರಿಯಲ್ಲಿ ಮಂಚದ ಕೆಳಗಿಂದ ವ್ಯಕ್ತಿಯು ಮಹಿಳೆ ಮೈಕೈ ಮುಟ್ಟಿದ ಅನುಭವ ಆಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು ಅವರು ಪರಿಶೀಲಿಸಿದಾಗ ಮಂಚದ ಅಡಿಯಿಂದ ಎದ್ದು ಬಂದ ವ್ಯಕ್ತಿ ಕಿಟಕಿಯಿಂದ ಹೊರಗೆ ಹೋಗಿದ್ದಾನೆ. ಅಪರಿಚಿತ ವ್ಯಕ್ತಿಯು ಮಹಿಳೆಯರು ಧರಿಸುವ ಫ್ರಾಕ್ ದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು,ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಈ ಕುರಿತಾದ ಮಾಹಿತ ಮಂಗಳವಾರ ಲಭ್ಯವಾಗಿದೆ.