ಬಾಗೇಪಲ್ಲಿ: ಅಡುಗೆ ಕಾರ್ಮಿಕರಿಗೆ ಗುರುತಿನಚೀಟಿ ಕಡ್ಡಾಯ ಪಟ್ಟಣದಲ್ಲಿ ರಾಜ್ಯ ಸಮಿತಿ ಸದಸ್ಯ ಬಿ.ಎಸ್.ರಮೇಶ್ ಬಾಬು
ಪಟ್ಟಣದ ಹಳೆ ಎಸ್ ಬಿ ಎಂ ಬ್ಯಾಂಕ್ ರಸ್ತೆಯ ಸಂತೆ ಬೀದಿಯಲ್ಲಿರುವ ಶ್ರೀ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಭಾಗ್ಯನಗರ ಅಸಂಘಟಿತ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಸೇವಾ ಟ್ರಸ್ಟ್ ವತಿಯಿಂದ ಅಡುಗೆ ಕೆಲಸಗಾರರಿಗೆ ಮತ್ತು ಸಹಾಯಕ ಕಾರ್ಮಿಕರಿಗೆ ಸಂಘದ ವತಿಯಿಂದ ಅನುಕೂಲವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಅಡುಗೆ ಕಾರ್ಮಿಕರ ಗುರುತಿನ ಚೀಟಿಗಾಗಿ ನೋಂದಣಿ ಕಾರ್ಯಕ್ರಮ ನಡೆಯಿತು ಈ ವೇಳೆ ಮಾತನಾಡಿದ ಅವರು ನಾವು ವಿವಿಧ ಕಡೆಗಳಲ್ಲಿ ಯಾವುದೇ ಕಾjರ್ಯಕ್ರಮ ಒಪ್ಪಿಕೊಂಡ ಅರ್ಧ ರಾತ್ರಿ ಸಮಯದಲ್ಲಿ ಸಂಚಾರ ಮಾಡಬೇಕಾಗುತ್ತದೆ ಆದರೆ ಆ ಸಮಯದಲ್ಲಿ ಪೊಲೀಸರು ನಮ್ಮನ್ನು ತಡೆದು ಪ್ರಶ್ನಿಸಿದಾಗ ನಾನು ಧೈರ್ಯವಾಗಿ ನಮ್ಮ ಗುರುತಿನ ಚೀಟಿ ತೋರಿಸಿದಾಗ ನೀವು ಅಡುಗೆ ಕಾರ್ಮಿಕರು ಎಂದು ಗುರ್ತಿಸುತ್ತಾರೆ