ಶಿರಹಟ್ಟಿ: ಹಣ ನೀಡಿ ಟಿಕೆಟ್ ಪಡೆದ ಆರೋಪವನ್ನು ರಾಮಣ್ಣ ಲಮಾಣಿ ಸಾಬೀತುಪಡಿಸಲಿ; ಪಟ್ಟಣದಲ್ಲಿ ಶಾಸಕ ಡಾ.ಚಂದ್ರು ಲಮಾಣಿ
ಇತ್ತೀಚೆಗೆ ಶಿರಹಟ್ಟಿ ಮೀಸಲು ಮತಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಈ ಬಾರಿ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ಗೆ ಟಿಕೆಟ್ ಪಡೆಯಲು ಹಣ ನೀಡಲಾಗಿದೆ ಎಂದು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದು, ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ನಾನು ಹೈಕಮಾಂಡಿಗೆ ಹಣ ನೀಡಿ ಟಿಕೆಟ್ ಪಡೆದದ್ದನ್ನು ಸಾಬೀತುಪಡಿಸಲಿ ಎಂದು ಬುಧವಾರ ಗದಗ ಪ್ರೆಸ್ ಕ್ಲಬ್ ನಲ್ಲಿ ಮಧ್ಯಾಹ್ನ 1:00ಗೆ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದರು.