ಕಲಬುರಗಿ: ನಗರದ ಖರ್ಗೆ ಸರ್ಕಲ್‌ನಲ್ಲಿ ಟಪ್ಪರ್ ಚಾಲಕನಿಂದ ಸರಣಿ ಅಪಘಾತ: ಎರಡು ಕಾರು ಡ್ಯಾಮೇಜ್
ಕಲಬುರಗಿ : ತಡರಾತ್ರಿ ಕಲಬುರಗಿ ನಗರದ ಖರ್ಗೆ ಸರ್ಕಲ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.. ರಾಮ ಮಂದಿರ ಕಡೆಯಿಂದ ಖರ್ಗೆ ಸರ್ಕಲ್‌ನತ್ತ ಬರುತ್ತಿದ್ದ ಟಿಪ್ಪರ್, ಪಾನಮತ್ತವಾಗಿದ್ದ ಚಾಲಕ ವೇಗವಾಗಿ ಬಂದು, ಖರ್ಗೆ ಸರ್ಕಲ್‌ನಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ನ11 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಪಾನಮತ್ತ ಟಿಪ್ಪರ್ ಚಾಲಕ ವೇಗವಾಗಿ ಅಡ್ಡಾದಿಡ್ಡಿಯಾಗಿ ಬಂದು ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಇನ್ನೂ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.. ಸ್ಥಳಕ್ಕೆ ಸಂಚಾರಿ ಠಾಣೆ-1 ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.