ಧಾರವಾಡ: ವ್ಯಸನ ಮುಕ್ತರಾಗಿ ಗೌರವ ಪಡೆಯಲು ಸಾಧ್ಯ: ರಾಯಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಿರ್ದೇಶಕ ಡಾ.ಪ್ರಕಾಶ ಭಟ್
ಧಾರವಾಡ ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಧಾರವಾಡ ಜಿಲ್ಲೆ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ೨೦೦೦ನೇ ಮದ್ಯವರ್ಜನ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಶಿಬಿರವು ವ್ಯಸನದಿಂದ ಕಳೆದುಹೋದ ಗೌರವ, ಸಮ್ಮಾನ, ಹಣ, ಆತ್ಮಸ್ಥೆರ್ಯ, ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ