ಕೃಷ್ಣರಾಜನಗರ: ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಕಿರಿಕ್. ಗುದ್ದಲಿಯಿಂದ ಹಲ್ಲೆ ಇಬ್ಬರ ವಿರುದ್ದ ಸಾಲಿಗ್ರಾಮ ಠಾಣೆಯಲ್ಲಿ FIR.
ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕುಮಾರ್ ಹಲ್ಲೆಗೆ ಒಳಗಾದವರು.ಗುದ್ದಲಿಯಿಂದ ಹಲ್ಲೆ ನಡೆಸಿದ ಹರೀಶ್ ಹಾಗೂ ಮಹೇಶ್ ಎಂಬುವರ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲಿಗ್ರಾಮ ಸರ್ವೆ ನಂ.148/1 ಹಾಗೂ 148/- ಒಂದು ಎಕ್ರೆ ಗದ್ದೆ ಕುಮಾರ್ ಗೆ ಸೇರಿದ್ದು.ಪಕ್ಕದ ಜಮೀನನ್ನ ರಾಂಪುರದ ಹರೀಶ್ ಭೋಗ್ಯಕ್ಕೆ ಪಡೆದಿದ್ರು.ದೊಡ್ಡಕಾಲುವೆಯಿಂದ ಜಮೀನಿಗೆ ನೀರು ಹಾದುಹೋಗುವ ಬದುವನ್ನ ಕುಮಾರ್ ಕೆತ್ತುತ್ತಿದ್ದಾಗ ಹರೀಶ್ ಬಂದು ಕಿರಿಕ್ ತೆಗೆದಿದ್ದಾರೆ.ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೈಯಲ್ಲಿಹಿಡಿದಿದ್ದ ಗುದ್ದಲಿಯಿಂದ ಕುಮಾರ್ ಮೇಲೆ ಹಲ್ಲೆ