ಬಳ್ಳಾರಿ: ಸತ್ಯ ನಾರಾಯಣ ಪೇಟೆ ಮುಖ್ಯರಸ್ತೆಯಲ್ಲಿ ತ್ಯಾಜ್ಯ ನಿರ್ವಹಣೆ ಕೊರತೆ, ಸರಣಿ ಬೈಕ್ ಸ್ಕಿಡ್
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಬಳಿ ಮುಖ್ಯರಸ್ತೆಯಲ್ಲಿ ಕಸ ಮತ್ತು ತ್ಯಾಜ್ಯ ವಸ್ತುಗಳು ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ಟೋಬರ್ 16, ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಹಲವು ಬೈಕ್ ಸವಾರರು ಸ್ಕಿಡ್ ಆಗಿ ಬೀಳುವ ಘಟನೆಗಳು ನಡೆದಿವೆ. ಈ ಘಟನೆಯ ನಂತರ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಮಹಾನಗರ ಪಾಲಿಕೆಯವರು ತಕ್ಷಣ ಸ್ಥಳ ಸ್ವಚ್ಛಗೊಳಿಸಿ ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.