ಚಿಟಗುಪ್ಪ: ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆ ರಂಗೋಲಿ ಸ್ಪರ್ಧೆ
ತಾಲೂಕಿನ ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 8ಕ್ಕೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಾತೆಯರು, ಮಕ್ಕಳು ಅತ್ಯಾಕರ್ಷಕ ವರ್ಣ ರಂಜಿತ ರಂಗೋಲಿಯನ್ನ ಬಿಡಿಸಿದ್ದರು. ನಂದಿನಿ ಸದಾಶಿವ ನಾಶಿ, ಮಹಾಲಿಂಗ ಸ್ವಾಮಿ, ವಿವೇಕ್ ರೊಡ್ಡಾ, ಕಾವೇರಿ ನಾಶಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.