ರಾಯಚೂರು: ನಗರದಲ್ಲಿ ದಸರಾ ಹಬ್ಬದ ಸಡಗರ; ನಾನಾ ವೇಷಧಾರಿಗಳಿಂದ ಭರ್ಜರಿ ನೃತ್ಯ
ಮಹಾನಗರ ಪಾಲಿಕೆಯಿಂದ ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ನಾಡದೇವಿಯ ಮೆರವಣಿಗೆಯು ನಗರದಲ್ಲಿ ಅಕ್ಟೋಬರ್ 2ರ ಗುರುವಾರ ಸಂಜೆ 4 ಗಂಟೆಗೆ ಸಡಗರ ಸಂಭ್ರಮದಿಂದ ಜರುಗಿತು. ಮಹಾನಗರ ಪಾಲಿಕೆಯ ಜೋನಲ್ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಿತು. ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹಲಗೆ-ಡೊಳ್ಳಿನ ಮೇಳ, ಕೋಲಾಟ, ಹುಲಿಕುಣಿತ ವೇಷಧಾರಿಗಳು ಸೇರಿದಂತೆ ನಾನಾ ಬಗೆಯ ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಮಹಾನಗರ ಪಾಲಿಕೆಯ ಜೋನಲ್ ಕಚೇರಿಯಿಂದ ಆರಂಭಗೊಂಡ ನಾಡದೇವಿಯ ಮೆರವಣಿಗೆಯು ಮಾಣಿಕಪ್ರಭು ಬನ್ನಿ ಮಂಟಪದವರೆಗೆ ಸಾಗಿತು. ಶಾಸಕರು ಅಧಿಕಾರಿಗಳು ಇದ್ದರು.