ಚಿತ್ರದುರ್ಗ ನಗರದಲದಲಿ ರೋಟರಿ ಶಾಲೆ ಪಕ್ಕದಲ್ಲೇ ರೆಸ್ಟೋರೆಂಟ್ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಈ ಶಾಲೆ ಪಕ್ಕ ರೆಸ್ಟೋರೆಂಟ್ ಬೇಡ ಎಂದು ವಿರೋಧಿಸಿ ಶಾಲಾ ವಿಧ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ನಗರದ ಡಿಸಿ ಕಚೇರಿ ಬಳಿ ಶಾಲಾ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿ ಪ್ರತಿಭಟನೆ ಮಾಡಿದ್ದಾರೆ. ಚಿತ್ರದುರ್ಗದ ಟೌನ್ ಕ್ಲಬ್ ಗೆ ಸೇರಿದ ಬಿಲ್ಡಿಂಗ್ ನಲ್ಲಿ ರೆಸ್ಟೋರೆಂಟ್ ಮಾಡಲು ಕೆಲಸ ಮಾಡಲಾಗುತ್ತಿದೆ. ಪಕ್ಕದಲ್ಲೇ ರೋಟರಿ ಶಾಲೆ ಇರುವ ಕಾರಣಕ್ಕೆ ವಿಧ್ಯಾರ್ಥಿಗಳ ವಿರೋಧಿಸಿದ್ದಾರೆ. ಕೂಡಲೇ ರೆಸ್ಟೋರೆಂಟ್ ಮಾಡುವುದು ಸ್ಥಗಿತ ಮಾಡುವಂತೆ ಒತ್ತಾಯಿಸಿದ್ದಾರೆ. ಇನ್ನೂ ಈ ಕುರಿತು ರೋಟರಿ ಶಾಲೆ ಮಕ್ಕಳಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.