ಜೋಯಿಡಾ : ತಾಲೂಕಿನ ಮೌಳಂಗಿ ಗ್ರಾಮ ಅರಣ್ಯ ಸಮಿತಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದು, ನೂತನ ಸಾಲಿನ ಅಧ್ಯಕ್ಷರಾಗಿ ಸ್ಥಳೀಯರಾದ ಧರ್ಮರಾಜ ಥೋರವತ್ತ ಅವರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬುಧವಾರ ಸಂಜೆ 7:30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ನೂತನ ಸಾಲಿಗೆ ಸದಸ್ಯರುಗಳಾಗಿ ಕೇಶವ ಥೋರವತ್ತ, ವಿನೋದ ಮೈನಾಗೋಳ, ಸಂಜು ಕಾಂಬಳೆ, ಗೀತಾ ಕಾಲಕುಂದ್ರಿ, ರಾಧಾ ಕಾಂಬಳೆ, ಸುಧಾ ಗಾಣಿಗೇರ, ಅನುರಾಧ ಥೋರವತ್ತ, ಬಸವರಾಜ ಥೋರವತ್ತ, ಗೌಸ್ ತಹಶೀಲ್ದಾರ್ ಮತ್ತು ಭಾರತಿ ವಿನಾಯಕ ಥೋರವತ್ತ ಅವರು ಆಯ್ಕೆಯಾಗಿದ್ದಾರೆ.