ರಬಕವಿ-ಬನಹಟ್ಟಿ: ಢವಳೇಶ್ವರ ಗ್ರಾಮದಲ್ಲಿ ಐದನೇ ತರಗತಿ ವಿದ್ಯಾರ್ಥಿಯ ಕಣ್ಣುಗುಡ್ಡೆ ಕಿತ್ತ ಒಂದನೇ ತರಗತಿ ವಿದ್ಯಾರ್ಥಿ
ಪೆನ್ ವಿಷಯಕ್ಕೆ ವಿದ್ಯಾರ್ಥಿಗಳ ನಡುವೆ ಆರಂಭವಾದ ಕ್ಷುಲ್ಲಕ ಜಗಳದಲ್ಲಿ ವಿದ್ಯಾರ್ಥಿಯೋರ್ವ ಮತ್ತೋರ್ವ ವಿದ್ಯಾರ್ಥಿಯ ಕಣ್ಣು ಗುಡ್ಡೆ ಕಿತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಮೊರಬದ ವಸತಿ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್ 3.ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಈ ಕುರಿತು ಮಹಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.