ಬೆಂಗಳೂರು ಉತ್ತರ: ಮಲ್ಲೇಶ್ವರಂನಲ್ಲಿ ಗಡಿಯಲ್ಲಿ ಯುದ್ಧ ಮಾಡುತ್ತಿರುವ ಸೈನಿಕರಿಗೆ ಗೌರವ ಸಮರ್ಪಣೆ
ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಯುದ್ಧ ಮಾಡ್ತಿರುವ ಭಾರತೀಯ ಯೋಧರಿಗೆ ಕನ್ನಡಪರ ಸಂಘಟನೆಗಳು ಗೌರವ ಸಮರ್ಪಣೆ ಮಾಡಿದ್ವು.. ಮೇ ಒಂಭತ್ತರಂದು ಸಂಜೆ 7ಗಂಟೆ ಸುಮಾರಿಗೆ ಮಲ್ಲೇಶ್ವರಂನ ಕುವೆಂಪು ಪುತ್ಥಳಿ ಬಳಿ ರಾಷ್ಟ್ರೀಯ ಧ್ವಜ ಹಿಡಿದು ಮೆರವಣಿಗೆ ಮಾಡಿದ್ರು.. ಕರ್ನಾಟಕ ರಕ್ಷಣಾ ವೇಧಿಕೆಯ ಮುಖಂಡರು, ಕಾರ್ಯಕರ್ತರಿಂದ ಮೆರವಣಿಗೆ ಮಾಡಿ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯ್ತು. ಈ ವೇಳೆ ಹಿರಿಯ ಹೋರಾಟಗಾರ ಸಾರಾ ಗೋವಿಂದು, ಮಾಜಿ ಸಚಿವ, ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ಗೌಡ ಸೇರಿ ಹಲವರು ಭಾಗಿಯಾಗಿದ್ರು.. ಇನ್ನು ಈ ಮೆರವಣಿಗೆಯಲ್ಲಿ ಮಲ್ಲೇಶ್ವರಂ ನ ಹಲವು ಜನರು ಭಾಗಿಯಾಗಿ ತಾವೂ ಸೈನಿಕರಿಗೆ ಗೌರವ ಸಲ್ಲಿಸಿದ್ರು..