ನೆಲಮಂಗಲ: ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ
ಲಕ್ಕೂರು ಗ್ರಾಮದಲ್ಲಿ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ. ವೇಳೆ ಮಾತನಾಡಿದ ಜಾಮೀಯಾ ಮಸೀದಿ ಅಧ್ಯಕ್ಷ ಖಲೀಂ ಉಲ್ಲಾ, ಬಡವರ ಹಸಿವು ಮತ್ತು ದಣಿವನ್ನು ಉಳ್ಳವನ್ನು ಅನುಸರಿಬೇಕೆನ್ನುವ ಸಂದೇಶ ಸಾರುವುದೇ ರಂಜಾನ್ ಆಚರಣೆ ಎಂದರು. ಲಕ್ಕೂರಿನ ಈದ್ಗಾ ಮೈದಾನದಲ್ಲಿ ರಂಜಾನ್ ಆಚರಣೆಯ ಭಾಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಗಳಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಮುಬೀನ್ ತಾಜ್ ಹಾಜರಿದ್ದರು.