ಅರಸೀಕೆರೆ: ಮನೆಯ ಬಾಗಿಲ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ಕಳ್ಳತನ ಬಾಣಾವರ ಟೌನ್ ಪೊಲೀಸ್ ಕ್ವಾಟ್ರಸ್ ಹಿಂಬಾಗ ಘಟನೆ
ಮನೆಯ ಬೀಗ ಮುರಿದು ಸುಮಾರು 3 ಲಕ್ಷ ಬೆಲೆಯ ಚಿನ್ನದ ಆಭರಣ ಮತ್ತು 2 ಲಕ್ಷ ರೂ.ನಗದು ಹಣ ಕಳವು ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಬಾಣಾವರ ಟೌನ್ ಪೊಲೀಸ್ ಕ್ವಾಟ್ರಸ್ ಹಿಂಭಾಗ ನಡೆದಿದೆ. ಅಜ್ಜಲ್ ಖಾನ್ ಎಂಬುವವರು ಮನೆ ಯೊಂದನ್ನು ಲೀಸ್ಗೆ ಪಡೆದು ವಾಸವಾಗಿದ್ದರು. ಸೆ.20 ರಂದು ಸಂಜೆ 6 ಗಂಟೆಗೆ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆ ಕಡೂರಿಗೆ ಹೋಗಿದ್ದರು. ಸೆ.22ರಂದು ಬೆಳಿಗ್ಗೆ ವಾಪಸ್ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲನ್ನು ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದಿದ್ದು, ಒಳಗೆ ಹೋಗಿ ನೋಡಲಾಗಿ ರೂಂ.ನಲ್ಲಿದ್ದ ಬೀರುವಿನ ಲಾಕ್ನ್ನು ರಾಡಿನಿಂದ ಮೀಟಿ ತೆಗೆದು ಅದರೊಳಗಿದ್ದ 40 ಗ್ರಾ.ತೂಕದ ಚಿನ್ನದ ಲಾಂಗ್ ಚೈನ್, 20 ಗ್ರಾಂ.ತೂಕದ ಚಿ