ನಾಗಮಂಗಲ: ಬಿ.ಜಿ ನಗರದಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ವಾಕಥಾನ್, ಚುಂಚಶ್ರೀ ಭಾಗಿ
ಬಿ.ಜಿ ನಗರದಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ವಾಕಥಾನ್ ಜರುಗಿ ಚುಂಚಶ್ರೀ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ನಾಗಮಂಗಲದ ಬಿ.ಜಿ ನಗರದ ಬಿಜಿಎಸ್ ಕಾಲೇಜು ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮವನ್ನು ಬಿಜಿಎಸ್ ಆಸ್ಪತ್ರೆಯ ಆಯೋಜನೆ ಮಾಡಿತ್ತು. ಆದಿ ಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆದ ವಾಕಥಾನ್'ನಲ್ಲಿ ಟೇಪ್ ಕಟ್ ಮಾಡುವ ಮೂಲಕ ವಾಕಥಾನ್ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ಕೊಟ್ಟರು. ವಾಕಥಾನ್ ನಲ್ಲಿ ನಟ ಧೃವಸರ್ಜಾ ಸೇರಿದಂತೆ ಹಲವು ಗಣ್ಯರು ನೂರಾರು ಜನರು ಹೆಜ್ಜೆ ಹಾಕಿದರು. ಇದೇ ವೇಳೆ ಬಿಜಿಎಸ್ ಶಾಖಾಮಠದ ಸ್ವಾಮೀಜಿಗಳು, ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ಡಿಸಿ ಡಾ. ಕುಮಾರ, ಸಿಇಓ ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಜರಿದ್ದರು.