ಶಿವಮೊಗ್ಗ: ಮಳಲಿಕೊಪ್ಪದಲ್ಲಿ ಹಾವುಗಳನ್ನ ಹಿಡಿದು ವಿಕೃತ ಮೆರೆದ ವಿಡಿಯೋ ವೈರಲ್: ಪ್ರಕರಣ ದಾಖಲು
ಹಾವುಗಳನ್ನ ಹಿಡಿದು ನಡುರಸ್ತೆಯಲ್ಲಿ ವಿಕೃತಿ ಮೆರೆದು,ಸೆಲ್ಫಿ ತೆಗೆದುಕೊಂಡು ವಿಡಿಯೋ ಶೂಟ್ ಮಾಡಿರುವ ವಿಡಿಯೋ ವೈರಲ್, ಯುವಕರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಶಿವಮೊಗ್ಗದ ಮತ್ತೂರು ರಸ್ತೆಯ ಮಳಲಿಕೊಪ್ಪದಲ್ಲಿ ನಡೆದಿದೆ. ಮಳಲಿಕೊಪ್ಪದ ಇರ್ಫಾನ್ ಮತ್ತು ಮೂವರ ವಿರುದ್ಧ ದೂರು ದಾಖಲಾಗಿದೆ. ಹೆಬ್ಬಾವುಗಳಿಗೆ ಬಾಯಿಗೆ ಪ್ಲಾಸ್ಟರ್ ಹಾಕಿ ಬಂದ್ ಮಾಡಿ. ವಿಕೃತವಾಗಿ ವರ್ತಿಸುತ್ತಾ ವಿಲಕ್ಷಣ ವಾಗಿ ಹಾವುಗಳ ಮೇಲೆ ದಬ್ಬಾಳಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇನ್ನ ಇರ್ಫಾನ್ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹಾವುಗಳನ್ನ ರಕ್ಷಣೆ ಮಾಡಿದ್ದಾರೆ. ಈ ಕುರಿತಾದ ಮಾಹಿತಿಯು ಮಂಗಳವಾರ ಲಭ್ಯವಾಗಿದೆ.