ದಾಂಡೇಲಿ : ಶಾಸಕ ಆರ್.ವಿ.ದೇಶಪಾಂಡೆಯವರ ವಿಶೇಷ ಪ್ರಯತ್ನದಡಿ ಮಂಜೂರಾಗಿ ರೂ.1,02,00,000/- ಮೊತ್ತದಲ್ಲಿ ನಗರದ ಕೆ.ಸಿ.ವೃತ್ತದಿಂದ ಜೆ ಎನ್.ರಸ್ತೆಯ ಸುಭಾಷನಗರ ಕ್ರಾಸ್ ವರೆಗೆ ನಗರದ ಸೌಂದರ್ಯಕರಣಕ್ಕಾಗಿ ಧಾರವಾಡದ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪ ವಿಭಾಗದ ವತಿಯಿಂದ ಒಟ್ಟು 74 ಅಲಂಕಾರಿಕ ಬೀದಿ ದೀಪಗಳಿಗೆ ಮಂಗಳವಾರ ಸಂಜೆ 7:30 ಗಂಟೆ ಸುಮಾರಿಗೆ ಜೆ.ಎನ್.ರಸ್ತೆಯಲ್ಲಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಚಾಲನೆಯನ್ನು ನೀಡಿದರು.