Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow
No video available

ಶಿರಸಿ: ಗಿಡಮಾವಿನಕಟ್ಟೆ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

Sirsi, Uttara Kannada | Jul 5, 2025
ಶಿರಸಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಲೇಕಲ್ ಬಕ್ಕಳದ ಗದ್ದೆಮನೆಯ ವಿಕ್ರಮ ರಾಮಕೃಷ್ಣ ಭಟ್ಟ (28) ಹಾಗೂ ಯಡಳ್ಳಿ ಸಮೀಪದ ಶಿರ್ಸಿಮಕ್ಕಿಯ ಕಶ್ಯಪ್ ಮಂಜುನಾಥ ಹೆಗಡೆ (27) ಬಂಧಿತ ಯುವಕರು. ಇವರಿಬ್ಬರು ಸಿಲ್ವರ್ ಟೊಯೋಟಾ ಇನ್ನೋವಾ ಕಾರ್ ನಲ್ಲಿ ಅಕ್ರಮ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಗಿಡಮಾವಿನಕಟ್ಟೆ ಬಳಿ ದಾಳಿ ನಡೆಸಿದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು, ಇಬ್ಬರನ್ನು ಬಂಧಿಸಿ, ಅಂದಾಜು 4,500 ರೂ. ಮೌಲ್ಯದ 80 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 5 ಲಕ್ಷ ರೂ. ಮೌಲ್ಯದ ಟೊಯೋಟಾ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.