ಬಂಗಾರಪೇಟೆ: ಪಟಾಕಿ ಚೀಟಿ ಹೆಸರಲ್ಲಿ ಪಟ್ಟಣದಲ್ಲಿ ಲಕ್ಷಾಂತರ ರೂ. ವಂಚನೆ
ಪಟಾಕಿ ಚೀಟಿ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ ಬಂಗಾರಪೇಟೆ ನಗರದಲ್ಲಿ ಘಟನೆ ನಡೆದಿದ್ದು ಭರತ್ ಎಂಬುವವನು ಲಕ್ಷಾಂತರ ರೂಪಾಯಿ ವಂಚಿತ ಆರೋಪಿಯೆಂದು ತಿಳಿದುಬಂದಿದ್ದು, ಪಟಾಕಿ ಅಂಗಡಿ ಮುಂದೆ ಕುಳಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಗಾರಪೇಟೆ ನಗರದ ಅಮರಾವತಿ ಬಡಾವಣೆಯ ತಾಯಿ ಚೌಡೇಶ್ವರಿ ದೀಪಾವಳಿ ಹಬ್ಬದ ಸಾಮಗ್ರಿಗಳ ಹೆಸರಿನಲ್ಲಿ ಚೀಟಿ ವ್ಯವಹಾರ ನಡೆಯುತ್ತಿದ್ದು, ಕಳೆದ ಒಂದು ವರ್ಷದಿಂದ ಜನರು ಪಟಾಕಿ ಚೀಟಿ ಹಾಕುತ್ತಿದ್ದರು. ದೀಪಾವಳಿ ಹಬ್ಬಕ್ಕು ಒಂದು ತಿಂಗಳ ಮುನ್ನವೇ ಪಟಾಕಿ, ಗಿಪ್ಟ್, ರೇಷನ್ ಕಿಟ್, ದಿನಸಿ ಸಾಮಗ್ರಿ ನೀಡುವ ಭರವಸೆ ನೀಡಿದ್ದರು. ಇದೀಗ ಕರೆ ಮಾಡಿದರು ಮಾಲೀಕ ಭರತ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಗ್ರಾಹಕರು ಕಣ್ಣೀರು ಹಾಕುತ್ತಿದ್ದಾರೆ.