ಸಂಡೂರು: ನನಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ಸಂಬಂಧವಿಲ್ಲ ; ಪಟ್ಟಣದಲ್ಲಿ ಸಂಸದ ಈ.ತುಕಾರಾಂ
Sandur, Ballari | Jun 12, 2025 ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಇಡಿಯವರಿಗೆ ತಿಳಿಸಿದ್ದೇನೆ ಎಂದು ಬಳ್ಳಾರಿ ಸಂಸದ ಈ.ತುಕರಾಂ ಹೇಳಿದ್ರು. ಸಂಡೂರು ಪಟ್ಟಣದ ತಮ್ಮ ನಿವಾಸದಲ್ಲಿ ಬುದುವಾರ ರಾತ್ರಿ 10:30ಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ್ರು..ಇಡಿವಯರು ಯಾವಾಗದ್ರು ಬರ್ಲಿ ನಾನು ಕ್ಲೀಯರ್ ಇದ್ದೇನೆ. ವಾಲ್ಮೀಕಿ ನಿಗಮದ ಹಣಕ್ಕೂ ನನಗೆ ಸಂಬಂಧವಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು 4ಬಾರಿ ಶಾಸಕನಾಗಿದ್ದೇನೆ. ಅಲ್ಪವಾಧಿ ಸಚಿವನಾಗಿದ್ದೇನೆ. ಈಗಾ ಎಂಪಿಯಾಗಿ ಕೆಲಸ ಮಾಡ್ತಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಿಲ್ಲದೆ ಇದ್ದೇನೆ ಎಂದ್ರು..ಇಡಿಯವ್ರು ನಿಗಮದ ಹಣ ಬಗ್ಗೆ ಕೇಳಿದ್ರು ಅದಕ್ಕು ನನಗೂ ಸಂಬಂಧವಿಲ್ಲ. ಸೀಜ್ ಮಾಡಲು ನನ್ನ ಬಳಿ ಆಸ್ತಿಯಿಲ್ಲ, ಆಸ್ತಿಯಾಗಿ ಮಕ್ಕಳಿದ್ದಾರೆ ಎಂದ್ರು