ಯಲ್ಲಾಪುರ: ಪಟ್ಟಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರಿಂದ ಬಲಿಪಾಡ್ಯಮಿ, ಗೋಪೂಜೆ ಆಚರಣೆ
ಬಲಿಪಾಡ್ಯಮಿ ಹಾಗೂ ಗೋಪೂಜೆ ಹಬ್ಬದ ಪ್ರಯುಕ್ತ ಶಾಸಕ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ 10ಕ್ಕೆ ತಮ್ಮ ನಿವಾಸದಲ್ಲಿ ಕುಟುಂಬಸ್ಥರೊಂದಿಗೆ ಗೋಮಾತೆಗೆ ಪೂಜೆ ಸಲ್ಲಿಸಿದರು. ಈ ವರ್ಷವೂ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಮನೆಯಲ್ಲಿ ಗೋಪೂಜೆಯನ್ನು ನೆರವೇರಿಸಿದರು. ಅವರು ಮತ್ತು ಅವರ ಕುಟುಂಬದ ಸದಸ್ಯರು ಗೋಮಾತೆಯನ್ನು ಸಿಂಗರಿಸಿ, ಪೂಜೆ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು