ಬೆಳಗಾವಿ: ನಗರದಲ್ಲಿ ಹಾನಿಕಾರಕ ಮಾಂಜಾ ದಾರ ಮಾರಾಟ ಮಾಡುತ್ತಿದ್ದವರ ಬಂಧನ
ನಗರದಲ್ಲಿ ಹಾನಿಕಾರಕ ಮಾಂಜಾ ದಾರ ಮಾರಾಟ ಮಾಡುತ್ತಿದ್ದವರ ಬಂಧನ. ಗಾಳಿಪಟ ಹಾರಿಸಲು ಬಳಸುವ ಹಾನಿಕಾರಕ ಮಾಂಜಾ ದಾರದಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರ ಕುತ್ತಿಗೆಗೆ ತಗುಲಿ ಗಂಭೀರ ಗಾಯಗಳಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ನಗರದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಈ ದಾರದ ಮಾರಾಟದ ಮೇಲೆ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಂಗಳವಾರ ಕೊತ್ವಾಲ ಗಲ್ಲಿಯ ಅಂಗಡಿಯಿಂದ ಮಾಂಜಾ ದಾರದ ರೋಲ್ಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ