ಶಿವಮೊಗ್ಗ: ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ: ನಗರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಹಿಂದೂ ಸಮಾಜ ಒಟ್ಟಾಗಿ ಇದನ್ನ ವಿರೋಧಿಸಬೇಕು ಸಿಎಂ ಸ್ಥಾನ ಹೋಗಿ ಬಿಡುತ್ತೆ ಅಂತ ಜಾತಿಗಣತಿ ವರದಿ ಜಾರಿಗೆ ತರುತ್ತಿಲ್ಲ. ಮುಸ್ಲಿಮರನ್ನ ಸಂತೃಪ್ತಿ ಪಡಿಸುವುದೊಂದೇ ಕಾಂಗ್ರೆಸ್ ನೀತಿಯಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ. ಹಿಂದೂ ಸಮಾಜವನ್ನು ಒಡೆಯಲು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗುತ್ತಿದ್ದಾರೆ.ಹೊಸ ಜಾತಿ,ಹೊಸ ಧರ್ಮ ಹುಟ್ಟು ಹಾಕಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.