ಶಿವಮೊಗ್ಗ: ನಗರದಲ್ಲಿ ವಿಷ ಸೇವಿಸಿ ಮೃತಪಟ್ಟ ಪೂಜಾ ಹೇಳಿಕೆಯ ವಿಡಿಯೋ ವೈರಲ್
ಗಂಡನ ಮನೆಯವರ ಕಿರುಕುಳಕ್ಕೆ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಪೂಜಾ ಆಸ್ಪತ್ರೆಯಲ್ಲಿದ್ದ ವೇಳೆ ಆಡಿದ ಮಾತುಗಳ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದ್ದು, ತನ್ನದೆಲ್ಲದ ತಪ್ಪಿಗೆ ಬಂದು ನನ್ನ ಬಳಿ ಜಗಳ ಆಡುತ್ತಿದ್ದ ಪತಿ ಶರತ್ ಎಂದು ಹೇಳಿದ್ದಾಳೆ.ಅಲ್ಲದೆ ಒಂದೇ ಒಂದು ಬಾರಿ ಪತಿ ಶರತ್ ನನ್ನ ಆಸ್ಪತ್ರೆಗೆ ಕರೆಸಿ, ನಾನು ನೋಡಬೇಕು ಎಂದಿರುವ ವಿಡಿಯೋ ಮನ ಕಲುಕುವಂತಿದೆ.