ಹಾಸನ: ಅರಕಲಗೂಡು ದಸರಾದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದ ಟ್ಯಾಬ್ಲೋ ಮೆರವಣಿಗೆ: ನಗರದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಆಕ್ರೋಶ
Hassan, Hassan | Oct 3, 2025 ಹಾಸನ : ಪಾರಂಪರಿಕವಾಗಿ ನಡೆಯುತ್ತಿರುವ ಅರಕಲಗೂಡಿನ ದಸರಾ ಉತ್ಸವದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರದ ಟ್ಯಾಬ್ಲೊಗೆ ಅವಕಾಶ ನೀಡಿರುವುದರಿಂದ ಹಿಂದೂಗಳ ಭಕ್ತಿ-ಭಾವನೆಗೆ ಧಕ್ಕೆ ತಲುಪಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು,ಈ ಘಟನೆ ಕಾರ್ಯಕರ್ತರಲ್ಲಿ ಭಾರಿ ಆಕ್ರೋಶ ಮೂಡಿಸಿತು. ವಿಷಯವಾಗಿ ತಹಸೀಲ್ದಾರರನ್ನು ಸಂಪರ್ಕಿಸಿದಾಗ, "ಟ್ಯಾಬ್ಲೊ ಪ್ರದರ್ಶನಕ್ಕೆ ನಾನೇ ಅನುಮತಿ ನೀಡಿದ್ದೇನೆ" ಎಂಬ ಹೇಳಿಕೆ ನೀಡಿರುವುದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ಮತಾಂಧರು ಅಡ್ಡಿಪಡಿಸುವುದು ಖಂಡನೀಯ ಎಂದರು