ಕಲಬುರಗಿ: ಕೆರಿಭೋಸ್ಗಾ ಗ್ರಾಮದಲ್ಲಿ ಡಾ ಅಂಬೇಡ್ಕರ್‌ರ ಪಂಚಲೋಹ ಮೂರ್ತಿ ಉದ್ಘಾಟನೆ: ನಗರದಲ್ಲಿ ಶ್ರೀ ವಿವೇಕಾನಂದ ಸ್ವಾಮೀಜಿ
ಕಲಬುರಗಿ : ಸೆಪ್ಟೆಂಬರ್ 15 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿ ಹೊರವಲಯದ ಕೆರಿಭೋಸ್ಗಾ ಗ್ರಾಮದಲ್ಲಿ ಡಾ ಬಿಆರ್ ಅಂಬೇಡ್ಕರ್‌ರವರ 12 ಅಡಿ ಎತ್ತರದ ಪಂಚಲೋಹದ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿವೇಕಾನಂದ ಸ್ವಾಮಿ ಹೇಳಿದ್ದಾರೆ. ಸೆ14 ರಂದು ಬೆಳಗ್ಗೆ 11.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಅನೇಕ ರಾಜಕೀಯ ಗಣ್ಯರು, ಮಠಾಧೀಶರು ಆಗಮಿಸಲಿದ್ದಾರೆಂದು ಹೇಳಿದರು.