ಹಾವೇರಿ: ತೆರೆಕಂಡ "ಕಾಂತಾರ ಚಾಪ್ಟರ್ -1" ಸಿನಿಮಾ ನೋಡಲು ಜನವೋ ಜನ; ಹಾವೇರಿಯ ಸರಸ್ವತಿ ಚಿತ್ರಮಂದಿರ ಎದುರು ನೂಕುನುಗ್ಗಲು
Haveri, Haveri | Oct 2, 2025 ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಗುರುವಾರ ವಿಜಯದಶಮಿ ದಿನದಂದು ತೆರೆ ಕಂಡಿದ್ದು, ಚಿತ್ರ ವೀಕ್ಷಣೆಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಕ್ಯೂ ನಿಂತಿದ್ದರು. ಹಾವೇರಿಯ ಸರಸ್ವತಿ ಚಿತ್ರ ಮಂದಿರ ಹಾಗೂ ಮಾಗಾವಿ ಚಿತ್ರ ಮಂದಿರ ಎದುರು ಅಭಿಮಾನಿಗಳು ಟಿಕೆಟ್ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ನೂಕುನುಗ್ಗಲು ಉಂಟಾಗಿದ್ದು ಕಂಡುಬಂದಿತು.