ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಕೆಂಪಯ್ಯನ ದೊಡ್ಡಿ ಗ್ರಾಮದ ಕೆಂಚೇಗೌಡ ಎಂಬುವರ ಪಾಳುಬಾವಿಗೆ ಬಿದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಹಿಡಿದು ಕನಕಪುರ ತಾಲೂಕಿನ ಸಂಗಮ್ ಅರಣ್ಯ ವಲಯಕ್ಕೆ ಬಿಡಲಾಗಿದೆ. ಕೆಂಚೇಗೌಡ ಎಂಬುವರಿಗೆ ಸೇರಿದ ಸುಮಾರು 70 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯನ್ನು ನೋಡಲು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಸಾರ್ವಜನಿಕರು ಆಗಮಿಸಿದ್ದರು. ಚಿರತೆಯನ್ನು ಬಾವಿಯಿಂಧ ಎತ್ತುತತಿದ್ದಂತೆ ಎಲ್ಲರೂ ಬೆಚ್ಚಿ ಬೆರಗಾದ ಪ್ರಸಂಗ ಜರುಗಿತು. ಚಿರತೆಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿಯುತ್ತಿದ್ದು ಕಂಡುಬಂದಿತು. ಗುರುವಾರ ಬೆಳಗ್ಗೆ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಪಾಳು ಬಾವಿಯಲ್ಲಿದ್ದ ಚಿರತೆಯನ್ನು ಬೋನಿನ ಮುಖಾಂತರ ಸೆರೆಹಿಡಿದು ಅರಣ್ಯ