ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಾದ್ಯಂತ ಭೂಮಿ ಹುಣ್ಣಿಮೆ ಸಂಭ್ರಮ
ದಸರಾ ಹಬ್ಬದ ಬಳಿಕ ಬರುವ ಹುಣ್ಣಿಮೆಯನ್ನು ವಿಶೇಷವಾಗಿ ಸಂಭ್ರಮ ಸಡಗರದಿಂದ ಭೂಮಿ ಹುಣ್ಣಿಮೆ ಎಂದು ಗುರುತಿಸಿಕೊಂಡು. ಈ ಹಬ್ಬವನ್ನ ಶಿವಮೊಗ್ಗ ಜಿಲ್ಲೆಯ ಅತ್ಯಂತ ಸಂಭ್ರಮ ಸಡಗರ ದಿಂದ ಪಾರಂಪರಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಂಗಳವಾರ ಭೂಮಿ ಹುಣ್ಣಿಮೆ ಹಿನ್ನೆಲೆ ರೈತರು ಹೊಲ ಗದ್ದೆಗಳಿಗೆ ತೆರಳಿ ತಾವು ಬೆಳೆದ ಬೆಳೆಗಳಿಗೆ ಹಾಗೂ ಭೂಮಿ ತಾಯಿಗೆ ವಿಶೇಷವಾಗಿ ವಿವಿಧ ಭಕ್ಷ ಭೋಜನವನ್ನು ನೈವೇದ್ಯ ಮಾಡುವ ಮೂಲಕ ಸಂಭ್ರಮದ ಭೂಮಿ ಹುಣ್ಣಿಮೆಯನ್ನ ಆಚರಿಸಿದ್ದರು.