ಹೆಗ್ಗಡದೇವನಕೋಟೆ: ಪಟ್ಟಣದ ಚುನಾವಣಾಧಿಕಾರಿ ಕಚೇರಿಯಿಂದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ವೃದ್ಧರ ಮನೆಗಳಿಗೆ ಮತದಾನ ಕಾರ್ಯಕ್ಕೆ ತೆರಳಿದ ಅಧಿಕಾರಿಗಳ ತಂಡ
ಹೆಚ್.ಡಿ.ಕೋಟೆ ಮತ್ರು ಸರಗೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ವೃದ್ಧರು ಸೇರಿದಂತೆ ಒಟ್ಟು 69 ಮಂದಿಗೆ ಮತದಾನ ಮಾಡಿಸಲು ಅವರ ಮನೆಗಳಿಗೆ ೧೦ ಸಿಬ್ಬಂದಿಗಳಂತೆ 8 ತಂಡಗಳು ಶನಿವಾರ ತೆರಳಿದವು. ಕ್ಷೇತ್ರದಲ್ಲಿ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಒಟ್ಟು 69 ಮತದಾರರಿದ್ದು, ಅವರ ಮನೆ ಬಾಗಿಲಿಗೆ ಮತಗಟ್ಟೆ ಅಧಿಕಾರಿ, ಅಧ್ಯಕ್ಷಾಧಿಕಾರಿ, ಸಾಮಾನ್ಯ ವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಸೆಕ್ಟರ್ ಅಧಿಕಾರಿ, ಪೊಲೀಸ್ ಸಿಬ್ಬಂದಿ ಮತ್ತು ವಿಡಿಯೋ ಗ್ರಾಫರ್ಗಳು ತೆರಳಿದರು.