ವಿಜಯಪುರ: ಶಾಸಕ ಯತ್ನಾಳ ಅವರು ಈ ನೆಲದ ಹೆಣ್ಣು ಮಕ್ಕಳನ್ನು, ದಲಿತ ಹೆಣ್ಣು ಮಕ್ಕಳನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ: ನಗರದಲ್ಲಿ ನ್ಯಾಯವಾದಿ ಪೂಜಾರಿ
ವಿಜಯಪುರ ನಗರ ಶಾಸಕ ಯತ್ನಾಳ ಅವರು ಈ ನೆಲದ ಹೆಣ್ಣು ಮಕ್ಕಳನ್ನು, ದಲಿತ ಹೆಣ್ಣು ಮಕ್ಕಳನ್ನುಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಯಾವುದೇ ಜನರು ಸಹಿಸಲು ಆಗಲ್ಲ. ದಲಿತರ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ.ಈ ನೆಲದ ಹೆಣ್ಣು ಮಕ್ಕಳಿಗೆ ಅಗೌರವ ತೋರಿಸಿದರೆ ನಿಮ್ಮ ಹಾಗೆ ನಮಗೂ ಮಾತನಾಡಲು ಬರುತ್ತದೆ. ಮುಂಬರುವ ದಿನಗಳಲ್ಲಿ ಇದೇ ತರಹ ಮುಂದು ವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಶ್ರೀನಾಥ್ ಪೂಜಾರಿ ಹೇಳಿದರು.